ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನವೂ ಟೀಂ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.ಮೊದಲ ಇನಿಂಗ್ಸ್ ನಲ್ಲಿ 326 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ 131 ರನ್ ಗಳ ಮಹತ್ವದ ಮುನ್ನಡೆ ಗಳಿಸಿತು. ಭಾರತದ ಪರ ನಿನ್ನೆ ಅಜೇಯರಾಗುಳಿದಿದ್ದ ನಾಯಕ ಅಜಿಂಕ್ಯಾ ರೆಹಾನೆ 112 ರನ್ ಗಳಿಸಿ ಔಟಾದರೆ ರವೀಂದ್ರ ಜಡೇಜಾ 57 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.