ಪುಣೆ: ಇತ್ತೀಚೆಗಿನ ದಿನಗಳಲ್ಲಿ ಸೋಲೇ ಗೊತ್ತಿರದವರಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಮೊದಲ ಪಂದ್ಯದಲ್ಲೇ ಶಾಕ್ ನೀಡಿದ ನ್ಯೂಜಿಲೆಂಡ್ ಪಡೆ ಇದೀಗ ಗೆಲುವಿನ ಒತ್ತಡಕ್ಕೆ ನೂಕಿದೆ. ಇಂದು ಕೀವೀಸ್ ವಿರುದ್ಧ ಟೀಂ ಇಂಡಿಯಾ ಪುಣೆಯಲ್ಲಿ ದ್ವಿತೀಯ ಏಕದಿನ ಪಂದ್ಯವಾಡುತ್ತಿದೆ. ಕಳೆದ ಪಂದ್ಯದಲ್ಲಿ ಭಾರತೀಯರು ಎಲ್ಲಾ ವಿಭಾಗದಲ್ಲಿ ವಿಫಲರಾಗಿ ಸೋಲನುಭವಿಸಿದ್ದರು. ಈ ಪಂದ್ಯವನ್ನು ಗೆಲ್ಲದಿದ್ದರೆ, ಮೂರು ಪಂದ್ಯಗಳ ಸರಣಿ ಕೈ ತಪ್ಪುವುದು. ಅಷ್ಟೇ ಅಲ್ಲ, ಎಷ್ಟೋ ದಿನಗಳ ನಂತರ ಸರಣಿ