ಹೈದರಾಬಾದ್: ಈ ವರ್ಷ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರೂ ಕಿರಿ ಕಿರಿ ಅನುಭವಿಸುವಂತಾಗಿದೆ. ಯಾವುದೇ ಮೈದಾನಕ್ಕೆ ಹೋದರೂ ಮಳೆಯ ಭೀತಿಯ ನಡುವೆಯೇ ಪಂದ್ಯ ಮುಗಿಸಬೇಕಿದೆ. ಕಳೆದೆರಡು ಟಿ20 ಪಂದ್ಯಗಳಲ್ಲೂ ಮಳೆಯ ಭೀತಿಯ ನಡುವೆ ಆಡಿದ್ದ ಕ್ರಿಕೆಟಿಗರು ಇಂದು ಹೈದರಾಬಾದ್ ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲೂ ಮಳೆ ಬಾರದಿರಲಿ ಎಂದು ಪ್ರಾರ್ಥಿಸುವಂತಾಗಿದೆ.ಹೇಳಿ ಕೇಳಿ ಈಗ ಸರಣಿ ಸಮಬಲವಾಗಿದೆ. ಸರಣಿ ಗೆಲ್ಲಬೇಕಾದರೆ ಉಭಯ ತಂಡಗಳಿಗೂ ಇಂದಿನ ಪಂದ್ಯ ಗೆಲ್ಲುವುದು