ಮುಂಬೈ: ಒಂದು ಕಾಲದಲ್ಲಿ ವಿಶ್ವ ವಿಖ್ಯಾತ ಸ್ಪಿನ್ನರ್ ಗಳನ್ನು ಕಂಡ ಟೀಂ ಇಂಡಿಯಾದಲ್ಲಿ ಈಗ ವೇಗಿಗಳದ್ದೇ ಕಾರುಬಾರು. ಹೊಸ ಹೊಸ ವೇಗಿಗಳು ತಂಡಕ್ಕೆ ಸೇರ್ಪಡೆಯಾಗುತ್ತಿದ್ದರೆ, ಸ್ಪಿನ್ನರ್ ಗಳ ಕೊರತೆ ಎದ್ದು ಕಾಣುತ್ತಿದೆ.ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ಸರಣಿಗಳಿಂದ ಟೀಂ ಇಂಡಿಯಾಗೆ ಹೊಸದಾಗಿ ಕೆಲವು ವೇಗದ ಬೌಲರ್ ಗಳು ಸಿಕ್ಕರು. ಭಾರತ ತಂಡಕ್ಕೆ ಹೊಸದಾಗಿ ಬರುತ್ತಿರುವ ಬೌಲರ್ ಗಳು ಹೆಚ್ಚಾಗಿ ವೇಗದ ಬೌಲಿಂಗ್ ಮಾಡುವವರೇ ಆಗಿದ್ದಾರೆ. ಆದರೆ ಸ್ಪಿನ್ನರ್ ಗಳು ಇತ್ತೀಚೆಗೆ