Widgets Magazine

ಇಂಗ್ಲೆಂಡ್ ನ್ನು ಹಿಂದಿಕ್ಕಿದ ಟೀಂ ಇಂಡಿಯಾ ಈಗ ಏಕದಿನ ನಂ.1

ದುಬೈ| Krishnaveni K| Last Modified ಶುಕ್ರವಾರ, 28 ಜೂನ್ 2019 (10:10 IST)
ದುಬೈ: ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಅತಿಥೇಯ ಇಂಗ್ಲೆಂಡ್ ಈಗ ಏಕದಿನ ಪಂದ್ಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಕಳೆದುಕೊಂಡಿದೆ.

 
ಇದೀಗ 123 ಅಂಕಗಳನ್ನು ಹೊಂದಿದ ಟೀಂ ಇಂಡಿಯಾ ನಂ.1 ಸ್ಥಾನಕ್ಕೇರಿದೆ. ಅತ್ತ ಇಂಗ್ಲೆಂಡ್ 122 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಜಾರಿದೆ. ಆದರೆ ಭಾರತಕ್ಕೆ ಈ ನಂ.1 ಪಟ್ಟ ತಾತ್ಕಾಲಿಕ ಮಾತ್ರ.
 
ಯಾಕೆಂದರೆ ಜುಲೈ 30 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದ್ದು, ಆ ಪಂದ್ಯದಲ್ಲಿ ಒಂದು ವೇಳೆ ಟೀಂ ಇಂಡಿಯಾ ಸೋತರೆ ನಂ.1 ಪಟ್ಟವನ್ನು ಮತ್ತೆ ಇಂಗ್ಲೆಂಡ್ ಗೆ ಬಿಟ್ಟುಕೊಡಬೇಕಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :