Widgets Magazine

ದ್ವಿತೀಯ ಟೆಸ್ಟ್ ಗೆಲುವಿನತ್ತ ಟೀಂ ಇಂಡಿಯಾ

ಜಮೈಕಾ| Krishnaveni K| Last Modified ಸೋಮವಾರ, 2 ಸೆಪ್ಟಂಬರ್ 2019 (07:07 IST)
ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಕಡೆಗೆ ಸಾಗಿದೆ. ಮೂರನೇ ದಿನದಂತ್ಯಕ್ಕೆ ವಿಂಡೀಸ್ ಎರಡನೇ ಪಾಳಿಯಲ್ಲಿ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ.

 
ಮೊದಲ ಇನಿಂಗ್ಸ್ ನಲ್ಲಿ ವಿಂಡೀಸ್ 117 ರನ್ ಗಳಿಗೆ ಆಲೌಟ್ ಆಗಿತ್ತು. ಜಸ್ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿದ್ದರು. ಭಾರತ ಫಾಲೋ ಆನ್ ಹೇರದೇ ದ್ವಿತೀಯ ಇನಿಂಗ್ಸ್ 4 ವಿಕೆಟ್ ನಷ್ಟಕ್ಕೆ 168 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಅಜಿಂಕ್ಯಾ ರೆಹಾನೆ ಅಜೇಯ 64 ಮತ್ತು ಹನುಮ ವಿಹಾರಿ ಅಜೇಯ 53 ರನ್ ಗಳಿಸಿದರು.
 
ಗೆಲುವಿಗೆ 498 ರನ್ ಗಳ ಬೃಹತ್ ಗುರಿ ಬೆನ್ನತ್ತಿರುವ ವಿಂಡೀಸ್ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿ ಸೋಲಿನತ್ತ ಮುಖ ಮಾಡಿದೆ. ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಇನ್ನೂ 423 ರನ್ ಗಳಿಸುವ ಅನಿವಾರ್ಯದಲ್ಲಿ ವಿಂಡೀಸ್ ಇದೆ.
ಇದರಲ್ಲಿ ಇನ್ನಷ್ಟು ಓದಿ :