ಟಾಯ್ಲೆಟ್ ತೊಳೀಬೇಕು, ಬೆಡ್ ಕ್ಲೀನ್ ಮಾಡಬೇಕು! ಹೋಟೆಲ್ ನಲ್ಲಿ ಖೈದಿಯಾದ ಟೀಂ ಇಂಡಿಯಾ!

ಬ್ರಿಸ್ಬೇನ್| Krishnaveni K| Last Modified ಬುಧವಾರ, 13 ಜನವರಿ 2021 (09:17 IST)
ಬ್ರಿಸ್ಬೇನ್: ನಾಲ್ಕನೇ ಟೆಸ್ಟ್ ಪಂದ್ಯವಾಡಲು ಬ್ರಿಸ್ಬೇನ್ ಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಅಕ್ಷರಶಃ ಖೈದಿಗಳಂತಾಗಿದ್ದಾರೆ.

 
ನಿನ್ನೆ ಇಲ್ಲಿಗೆ ಬಂದಿಳಿದೊಡನೇ ಆಟಗಾರರನ್ನು ಮೈದಾನದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಪಂಚತಾರಾ ಹೋಟೆಲ್ ಗೆ ಕರೆದೊಯ್ಯಲಾಗಿದೆ. ಅಲ್ಲಿ ಕ್ರಿಕೆಟಿಗರನ್ನು ಅವರವರ ಕೊಠಡಿಗೆ ಕಳುಹಿಸಿ ಲಾಕ್ ಮಾಡಲಾಗಿದೆ. ಕ್ರಿಕೆಟಿಗರು ಈ ಕೊಠಡಿ ಬಿಟ್ಟು ಎಲ್ಲೂ ಹೊರಹೋಗುವಂತಿಲ್ಲ.
 
ಕ್ರಿಕೆಟಿಗರಿಗೆ ಇನ್ನೂ ಅಸಮಾಧಾನಕರ ಸಂಗತಿಯೆಂದರೆ ಅವರ ಹೋಟೆಲ್ ರೂಂನ ಟಾಯ್ಲೆಟ್ ಕ್ಲೀನ್ ಮಾಡುವುದು, ಬೆಡ್ ಸರಿಪಡಿಸುವುದು ಇತ್ಯಾದಿ ಕೆಲಸಗಳನ್ನೂ ಅವರೇ ಮಾಡಬೇಕಿದೆ. ಹೋಟೆಲ್ ಇಡೀ ಖಾಲಿಯಿದ್ದರೂ ರೂಂ ಬಿಟ್ಟು ಹೋಟೆಲ್ ನ ಬೇರೆ ಯಾವುದೇ ಭಾಗವನ್ನೂ ಬಳಸುವಂತಿಲ್ಲ. ಇದು ಕ್ರಿಕೆಟಿಗರಿಗೆ ಅಸಮಾಧಾನ ತಂದಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :