ಕೊಲೊಂಬೋ: ತ್ರಿಕೋನ ಟಿ 20 ಸರಣಿ ಆರಂಭಕ್ಕೆ ಮೊದಲು ಈ ಸರಣಿ ಗೆಲ್ಲುವ ಫೇವರಿಟ್ ತಂಡ ನಾವಲ್ಲ ಎಂದು ಹಂಗಾಮಿ ನಾಯಕ ರೋಹಿತ್ ಶರ್ಮಾ ಘೋಷಿಸಿದ್ದರು. ಇದೀಗ ಅದರಂತೆಯೇ ನಡೆದುಕೊಂಡಿದ್ದಾರೆ.ಮೊದಲ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಸೋತು ಚುಟುಕು ಕ್ರಿಕೆಟ್ ನ ಫಲಿತಾಂಶ ಹೇಗೆ ಬೇಕಾದರೂ ವಾಲಬಹುದು ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 20 ಓವರ್ ಗಳಲ್ಲಿ 174 ರನ್ ಗಳಿಸಿತು. ಶಿಖರ್ ಧವನ್ ಬಿರುಗಾಳಿಯಂತೆ