ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಅಂತಿಮ ಏಕದಿನದ ಜತೆಗೆ ಸರಣಿ ಸೋತ ಟೀಂ ಇಂಡಿಯಾ ಹಲವು ಬೇಡದ ದಾಖಲೆಗಳನ್ನು ಮೈಮೇಲೆಳೆದುಕೊಂಡಿದೆ.ಕಳೆದ 28 ತಿಂಗಳ ಬಳಿಕ ಟೀಂ ಇಂಡಿಯಾವ ತವರಿನಲ್ಲಿ ಏಕದಿನ ಸರಣಿಯೊಂದನ್ನು ಸೋತಿದೆ. 2015 ರಲ್ಲಿ ದ.ಆಫ್ರಿಕಾ ವಿರುದ್ಧ 2-3 ಅಂತರದಿಂದ ಸರಣಿ ಸೋತ ಬಳಿಕ ಇದೇ ಮೊದಲ ಬಾರಿಗೆ ತವರಿನಲ್ಲಿ ಸೋತ ಅವಮಾನಕ್ಕೆ ಗುರಿಯಾಗಿದೆ.ಇನ್ನು, ವಿರಾಟ್ ಕೊಹ್ಲಿ ನೇತೃತ್ವದಲ್ಲಿ ತವರಿನಲ್ಲಿ ಮೊದಲ ಏಕದಿನ ಸರಣಿ ಸೋಲು