ಆರಂಭಿಕ ಆಘಾತಕ್ಕೊಳಗಾದ ಟೀಂ ಇಂಡಿಯಾ

ಬ್ರಿಸ್ಬೇನ್| Krishnaveni K| Last Modified ಶನಿವಾರ, 16 ಜನವರಿ 2021 (09:50 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ.

 
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 369 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ 11 ರನ್ ಗಳಿಸುವಷ್ಟರಲ್ಲೇ ಶಬ್ನಂ ಗಿಲ್ ವಿಕೆಟ್ ಕಳೆದುಕೊಂಡಿತು. ಅವರು 7 ರನ್ ಗಳಿಸಿ ಪ್ಯಾಟ್ ಕ್ಯುಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಇದೀಗ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಕೂಡಾ 44 ರನ್ ಗಳಿಗೆ ಲಿಯೋನ್ ಬೌಲಿಂಗ್ ನಲ್ಲಿ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಇದೀಗ ಚೇತೇಶ್ವರ ಪೂಜಾರ 8 ಮತ್ತು ನಾಯಕ ಅಜಿಂಕ್ಯಾ ರೆಹಾನೆ ಖಾತೆ ತೆರೆಯದೇ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :