ಬೆಂಗಳೂರು: ತನ್ನ ಕಳಪೆ ಬ್ಯಾಟಿಂಗ್ ಗೆ ಬೆಲೆ ತೆತ್ತ ಟೀಂ ಇಂಡಿಯಾ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯ ಸೋಲುವುದರೊಂದಿಗೆ ಸರಣಿ ಗೆಲುವು ಕೈ ಜಾರಿಸಿಕೊಂಡಿದೆ.ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದ ಎರಡು ಓವರ್ ಉತ್ತಮವಾಗಿ ರನ್ ಕಲೆ ಹಾಕುವ ಮೂಲಕ ಅದ್ಭುತ ಆರಂಭ ನೀಡಿತು. ಆದರೆ ನಂತರ ರೋಹಿತ್ ಶರ್ಮಾ ಔಟಾದ ಬಳಿಕ ಒಬ್ಬೊಬ್ಬರಾಗಿ ಪೆವಿಲಿಯನ್ ಪೆರೇಡ್ ನಡೆಸಿದ್ದರಿಂದ