ಸೆಂಚೂರಿಯನ್: ಇತ್ತೀಚೆಗಿನ ದಿನಗಳಲ್ಲಿ ಸೋಲಿನ ರುಚಿಯೇ ಕಾಣದೆ ಮದವೇರಿದ ಆನೆಯಂತೆ ಸಾಗುತ್ತಿದ್ದ ಟೀಂ ಇಂಡಿಯಾಗೆ ದ.ಆಫ್ರಿಕಾ ಸರಿಯಾಗಿಯೇ ಅಂಕುಶ ಹಾಕಿದೆ. ನಿಗಿಡಿ ಲುಂಗಿ ಡ್ಯಾನ್ಸ್ ಮಾಡಿಸುತ್ತಿದ್ದರೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಬಾಲ ಮುದುರಿಕೊಂಡು ಎರಡು ವರ್ಷಗಳ ನಂತರ ಟೆಸ್ಟ್ ಸರಣಿ ಸೋಲಿನ ಅವಮಾನದಿಂದ ತಲೆತಗ್ಗಿಸುವಂತಾಗಿದೆ. ದ.ಆಫ್ರಿಕಾದಲ್ಲಿ ಇದುವರೆಗೆ ಕಂಡರಿಯದ ಗೆಲುವು ಕಾಣಲು ಹೊರಟಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ 135 ರನ್ ಗಳ ಹೀನಾಯ