ಮುಂಬೈ: ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎಲ್ಲಾ ಐಸಿಸಿ ಕೂಟಗಳಲ್ಲಿ ಯಶಸ್ಸು ಸಾಧಿಸಿದೆ. ಅವರನ್ನು ಅದೃಷ್ಟದ ನಾಯಕ ಎಂದೇ ಕರೆಯಲಾಗುತ್ತಿತ್ತು.ಆದರೆ ಧೋನಿ ತಂಡದಿಂದ ಹೊರ ನಡೆದ ಬೆನ್ನಲ್ಲೇ ಟೀಂ ಇಂಡಿಯಾದ ಅದೃಷ್ಟವೋ ಹೊರಟು ಹೋಯ್ತಾ? ಹೀಗೊಂದು ಅನುಮಾನ ಕ್ರಿಕೆಟ್ ಪ್ರೇಮಿಗಳಿಗೆ ಬರದೇ ಇರದು.ಧೋನಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಇಬ್ಬರೂ ನಾಯಕತ್ವದ ವಿಚಾರದಲ್ಲಿ ಯಾವುದೇ ಕಳಪೆಯೇನಲ್ಲ. ಹಾಗಿದ್ದರೂ ಇಬ್ಬರಿಗೂ ಐಸಿಸಿ ಟೂರ್ನಿಗಳಲ್ಲಿ ಯಶಸ್ಸು ಸಿಗುತ್ತಿಲ್ಲ