ಲಂಡನ್: ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಮುಕ್ತಾಯವಾದ ಬಳಿಕ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾದಲ್ಲಿ ಸಣ್ಣ ಬದಲಾವಣೆಯಾಗಲಿದೆ.ಗಾಯಗೊಂಡಿರುವ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಟಿ20 ಪಂದ್ಯದಲ್ಲಿ ದೀಪಕ್ ಚಹರ್ ಆಯ್ಕೆಯಾಗಿದ್ದರು. ಇದೀಗ ಏಕದಿನ ಸರಣಿಗೂ ಬುಮ್ರಾ ಅಲಭ್ಯರಾಗಿರುವುದರಿಂದ ಅವರ ಸ್ಥಾನಕ್ಕೆ ಶ್ರಾದ್ಧೂಲ್ ಠಾಕೂರ್ ಆಯ್ಕೆಯಾಗಿದ್ದಾರೆ. ಭಾರತ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಶ್ರಾದ್ಧೂಲ್ ಇದುವರೆಗೆ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಐದು ವಿಕೆಟ್ ಕಬಳಿಸಿದ್ದಾರೆ.ಈ ನಡುವೆ ಐರ್ಲೆಂಡ್ ವಿರುದ್ಧ