ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನ್ನು ಟೀಂ ಇಂಡಿಯಾ ಗೆದ್ದರೆ ಯಾವ ತಂಡವೂ ಮಾಡದ ದಾಖಲೆಯೊಂದು ಭಾರತಕ್ಕೆ ಒಲಿಯಲಿದೆ.ಈಗಾಗಲೇ ಭಾರತ 60 ಓವರ್ ಗಳ ಏಕದಿನ ವಿಶ್ವಕಪ್, 50 ಓವರ್ ಗಳ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಇದೀಗ ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ನ್ನೂ ಗೆದ್ದುಕೊಂಡರೆ, ಐಸಿಸಿ ಆಯೋಜಿಸುವ ಎಲ್ಲಾ ವಿಶ್ವಕಪ್ ಫೈನಲ್ಸ್ ನ್ನೂ ಗೆದ್ದುಕೊಂಡ ಸಾಧನೆ ಮಾಡಲಿದೆ.60