ಮುಂಬೈ: ಕೊರೋನಾದಿಂದಾಗಿ ಕಳೆದ ಎರಡು ತಿಂಗಳಿನಿಂದ ಕ್ರಿಕೆಟ್ ನಡೆದಿಲ್ಲ, ಮೈದಾನಕ್ಕಿಳಿದಿಲ್ಲ, ಜಿಮ್ ಗೆ ಹೋಗಿ ಫಿಟ್ನೆಸ್ ಮಾಡಿಲ್ಲ. ಹೀಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಮತ್ತೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳುವುದು ಸುಲಭವಲ್ಲ. ಕ್ರಿಕೆಟಿಗರು ಮತ್ತೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ತಯಾರಾಗಲು ಇನ್ನು 6-8 ವಾರ ಬೇಕಾಗಬಹುದು ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.ಕ್ರಿಕೆಟಿಗರು ಮತ್ತೆ ತಯಾರಾಗಲು 6-8 ವಾರಗಳ ಕಾಲ ತರಬೇತಿ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಬೇಕಾಗಬಹುದು. ವೃತ್ತಿಪರ ಕ್ರಿಕೆಟಿಗರಿಗೆ