ಮುಂಬೈ: ಕೊರೋನಾ ಹಾವಳಿಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್ ಅಂಗಣಕ್ಕೇ ಇಳಿಯದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ಪಂದ್ಯಕ್ಕೆ ತಯಾರಾಗಬೇಕಾದರೆ ಕನಿಷ್ಟ ನಾಲ್ಕು ವಾರಗಳ ತರಬೇತಿ ಶಿಬಿರದ ಅಗತ್ಯವಿದೆ.ಆದರೆ ಇದಕ್ಕೆ ಸೂಕ್ತ ಜಾಗ ಯಾವುದು ಎಂಬ ಬಗ್ಗೆ ಬಿಸಿಸಿಐ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮೂಲಗಳ ಪ್ರಕಾರ ದುಬೈ, ಧರ್ಮಶಾಲಾ ಅಥವಾ ಅಹಮ್ಮದಾಬಾದ್ ನಲ್ಲಿ ಟೀಂ ಇಂಡಿಯಾಗೆ ತರಬೇತಿ ಶಿಬಿರ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.ಹೇಗಿದ್ದರೂ ಭಾರತದ ಬಹುತೇಕ ಕ್ರಿಕೆಟಿಗರು ಐಪಿಎಲ್