ಮೆಲ್ಬೋರ್ನ್: ಪರ್ತ್ ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಮುಂದಿನ ಪಂದ್ಯ ಗೆಲ್ಲಬೇಕಾದರೆ ಟೀಂ ಇಂಡಿಯಾ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಿದೆ.ಟೀಂ ಇಂಡಿಯಾ ಕಳೆದ ಕೆಲವು ದಿನಗಳಿಂದ ತಲೆನೋವಾಗಿರುವುದು ಆರಂಭಿಕರ ಫಾರ್ಮ್. ಕೆಎಲ್ ರಾಹುಲ್, ಮುರಳಿ ವಿಜಯ್ ಇಬ್ಬರೂ 10 ರನ್ ಒಳಗೇ ವಿಕೆಟ್ ಒಪ್ಪಿಸಿ ನಡೆಯುತ್ತಿರುವುದರಿಂದ ಭಾರತ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದು ಮಧ್ಯಮ ಕ್ರಮಾಂಕದ ಮೇಲೆ ಅತಿಯಾದ ಒತ್ತಡ ತರುತ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ