ಟೀಂ ಇಂಡಿಯಾ ಹೊಸ ಸಮವಸ್ತ್ರ ಇಂದು ಲಾಂಚ್

ದುಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (09:10 IST)
ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮೊದಲು ಬಹುತೇಕ ತಂಡಗಳು ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು, ಭಾರತದ ಉಡುಗೆ ಇಂದು ಅನಾವರಣಗೊಳ್ಳಲಿದೆ.

 
ಈಗಾಗಲೇ ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಸೇರಿದಂತೆ ಹಲವು ತಂಡಗಳು ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿವೆ. ಐಸಿಸಿ ಭಾರತದ ಅಭಿಮಾನಿಗಳಿಗಾಗಿ ಹೊಸ ವಿನ್ಯಾಸದ ಜೆರ್ಸಿಯನ್ನು ತನ್ನ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿದೆ.
 
ಬಹುಶಃ ಇಂದು ಅನಾವರಣಗೊಳ್ಳಲಿರುವ ತಂಡದ ಅಧಿಕೃತ ಜೆರ್ಸಿಯೂ ಇದೇ ವಿನ್ಯಾಸ ಹೋಲಬಹುದು ಎಂಬು ಲೆಕ್ಕಾಚಾರ ಹಾಕಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :