ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಮೈದಾನಕ್ಕಿಳಿಯದೇ ತಿಂಗಳುಗಳೇ ಕಳೆದಿವೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿದ್ಧವಾಗಬೇಕಾದರೆ ಕ್ರಿಕೆಟಿಗರಿಗೆ ಸುದೀರ್ಘ ತರಬೇತಿ ಅವಧಿ ಬೇಕಾಗುತ್ತದೆ.ಕೊರೋನಾ, ಲಾಕ್ ಡೌನ್ ಒಂದು ಹದಕ್ಕೆ ಬಂದ ಮೇಲೆ ಆಟಗಾರರಿಗೆ ತರಬೇತಿ ಶಿಬಿರ ಆಯೋಜಿಸುವುದಾಗಿ ಬಿಸಿಸಿಐ ಈ ಮೊದಲು ಹೇಳಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಬಿಸಿಸಿಐ ಅವಸರದ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.ಲಾಕ್ ಡೌನ್ ಸಡಿಲಿಕೆಯಾಗಿ ಖಾಲಿ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಅನುಮತಿ ಸಿಕ್ಕರೂ ಕೊರೋನಾ ಸೋಂಕಿನ