ಕೊಲೊಂಬೊ: ಸತತ ಮಳೆಯಾಗುತ್ತಿದ್ದರೂ ಎರಡು ದಿನಗಳಿಂದ ನಿರಂತರವಾಗಿ ಮೈದಾನ ಒದ್ದೆಯಾಗದಂತೆ ಸಂರಕ್ಷಿಸಿದ ಮೈದಾನ ಸಿಬ್ಬಂದಿಗಳಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅಭಿನಂದನೆ ಸಲ್ಲಿಸಿದ್ದಾರೆ.ಪಂದ್ಯದ ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ ಮೈದಾನ ಸಿಬ್ಬಂದಿಗಳನ್ನು ವಿಶೇಷವಾಗಿ ಕೊಂಡಾಡಿದರು. ಸತತ ಎರಡು ದಿನದಿಂದ ಅವಿರತವಾಗಿ ಮೈದಾನ ಒಣಗಿಸಲು ಸಿಬ್ಬಂದಿಗಳು ಮಾಡಿದ ಕೆಲಸ ನಿಜಕ್ಕೂ ಅಭಿನಂದನಾರ್ಹ. ಇದು ಅಷ್ಟು ಸುಲಭದ ಕೆಲಸವಲ್ಲ. ಇಡೀ ತಂಡದ ಪರವಾಗಿ