ಮುಂಬೈ: ಬಿಸಿಸಿಐ ಕೃಪಾಕಟಾಕ್ಷದಿಂದ ಇಷ್ಟು ದಿನ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಾಡಾ ಸಮಿತಿಯ ಉದ್ದೀಪನಾ ಔಷಧ ಸೇವನೆ ಪರೀಕ್ಷೆಯ ಬಿಸಿ ಇರಲಿಲ್ಲ. ಆದರೆ ಇನ್ನು ಮುಂದೆ ಕ್ರಿಕೆಟಿಗರಿಗೂ ಈ ಬಿಸಿ ತಗುಲಲಿದೆ.ಇಷ್ಟು ದಿನ ನಾಡಾ ಕಾರ್ಯನಿರ್ವಹಣೆ ಕುರಿತು ಅಸಮಾಧಾನ ಹೊಂದಿದ್ದ ಬಿಸಿಸಿಐ ಕ್ರಿಕೆಟಿಗರಿಗೆ ಈ ಪರೀಕ್ಷೆಗೊಳಪಡಿಸಲು ಒಪ್ಪಿರಲಿಲ್ಲ. ಆದರೆ ಪೃಥ್ವಿ ಶಾ ಪ್ರಕರಣದ ಬಳಿಕ ಬಿಸಿಸಿಐ ಈಗ ನಾಡಾ ಸಮಿತಿ ತನ್ನ ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸಲು ಒಪ್ಪಿದೆ.ಅಲ್ಲದೆ, ನಾಡಾ ಕಾರ್ಯನಿರ್ವಹಣೆ ನಮಗೆ