ಪೋರ್ಟ್ ಎಲಿಜೆಬತ್: ಕಾಮನಬಿಲ್ಲಿನ ನಾಡಿನಲ್ಲಿ ಹೊಸದೊಂದು ಇತಿಹಾಸ ರಚಿಸಲು ಸಿದ್ಧವಾಗಿರುವ ಟೀಂ ಇಂಡಿಯಾ ಇಂದು ಐದನೇ ಏಕದಿನ ಆಡಲು ಸಜ್ಜಾಗಿದೆ. ಆದರೆ ಭಾರತ ತಂಡಕ್ಕೆ ಕಳೆದ ಪಂದ್ಯದಲ್ಲಿ ಮಾಡಿದ್ದ ಸ್ವಯಂಕೃತ ಅಪರಾಧಗಳನ್ನು ತಿದ್ದಿಕೊಳ್ಳುವ ಅನಿವಾರ್ಯತೆಯಿದೆ. ಫೀಲ್ಡಿಂಗ್ ಮಾಡಿದ ತಪ್ಪುಗಳು, ಬೌಲಿಂಗ್ ನಲ್ಲಿ ತೋರಿದ ಬೇಜವಾಬ್ದಾರಿತನ ತಿದ್ದಿಕೊಳ್ಳಲೇಬೇಕಿದೆ.ಕೊಹ್ಲಿ, ಧವನ್ ಆಟದಿಂದಾಗಿ ಭಾರತ ತಂಡದ ಬ್ಯಾಟಿಂಗ್ ಹುಳುಕು ಹೆಚ್ಚಾಗಿ ಹೊರ ಬಂದಿಲ್ಲ. ಹಾಗಿದ್ದರೂ ಮಧ್ಯಮ ಕ್ರಮಾಂಕ ಇನ್ನೂ ಸಿಡಿದಿಲ್ಲ. ಅಜಿಂಕ್ಯಾ ರೆಹಾನೆ,