ಕಾರ್ಡಿಫ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಇಂದು ದ್ವಿತೀಯ ಪಂದ್ಯವಾಡಲಿದೆ. ಕಾರ್ಡಿಫ್ ಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಕಠಿಣ ಅಭ್ಯಾಸ ನಡೆಸಿದ್ದಾರೆ. ಸರಣಿಯಲ್ಲಿ ಒಟ್ಟು ಮೂರು ಟಿ20 ಪಂದ್ಯಗಳಿದ್ದು, ಇಂದು ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ.ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದ ಅತಿಥೇಯ ತಂಡಕ್ಕೆ ಇದೀಗ ಕೆಎಲ್ ರಾಹುಲ್, ಕುಲದೀಪ್ ಯಾದವ್ ರನ್ನು ಎದುರಿಸುವ ಬಗ್ಗೆ