ಲಂಡನ್: ಪಾಕಿಸ್ತಾನದ ಜತೆ ಸುರಿಯುತ್ತಿದ್ದ ಮಳೆಯ ನಡುವೆಯೇ ನೀರು ಕುಡಿದಷ್ಟು ಸುಲಭವಾಗಿ ಗೆದ್ದು ಬೀಗಿದ್ದಾಯ್ತು. ಇದೀಗ ಬಲಭೀಮ ಟೀಂ ಇಂಡಿಯಾ ಪಡೆಯ ಎದುರು ಹಲ್ಲಿಲ್ಲದ ಹಾವಿನಂತಾಗಿರುವ ಲಂಕಾ ಎದುರಾಗುತ್ತಿದೆ. ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭಾರತಕ್ಕೆ ಲಂಕಾ ಎದುರಾಳಿ. ಒಂದು ಕಾಲದಲ್ಲಿ ಇದೂ ಉಪಖಂಡದ ದೈತ್ಯ ಶಕ್ತಿಯೇ. ಆದರೆ ಈಗ ಎಲ್ಲಾ ವಿಭಾಗದಲ್ಲೂ ಬಡವಾಗಿದೆ.ಸನತ್ ಜಯಸೂರ್ಯ, ಸಂಗಕ್ಕಾರ, ಮುತ್ತಯ್ಯ ಮುರಳೀಧರನ್ ಅಬ್ಬರಿಸುತ್ತಿದ್ದ ಲಂಕಾ ತಂಡಕ್ಕೂ ಈಗಿನ