ಆಕ್ಲೆಂಡ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಏಕದಿನ ದಿಗ್ವಿಜಯ ಸಾಧಿಸಿ ಇದೀಗ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್ ಗಳ ಸರಣಿ ಆಡಲು ಆಕ್ಲೆಂಡ್ ಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.ಇದುವರೆಗೆ ಆಸ್ಟ್ರೇಲಿಯಾದಂತೆ ನ್ಯೂಜಿಲೆಂಡ್ ನಲ್ಲೂ ಟೀಂ ಇಂಡಿಯಾ ಜಯ ಗಳಿಸಲು ಹೆಣಗಾಡಿತ್ತು. ಅಲ್ಲಿನ ಟೀಂ ಇಂಡಿಯಾ ದಾಖಲೆ ಅಷ್ಟೇನೂ ಉತ್ತಮವಾಗಿಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೊಸ ದಾಖಲೆ ಬರೆಯಲಿದೆ ಎಂಬುದು ಅಭಿಮಾನಿಗಳ