Photo Courtesy: Twitterರಾಜ್ ಕೋಟ್: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯವನ್ನು 91 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.ಇದರೊಂದಿಗೆ ಟೀಂ ಇಂಡಿಯಾ ಒಂದೇ ತಂಡದ ವಿರುದ್ಧ ತಂಡವೊಂದು ಅತೀ ಹೆಚ್ಚು ಸರಣಿ ಗೆಲುವು ದಾಖಲಿಸಿದ ವಿಶ್ವದಾಖಲೆಯೊಂದನ್ನು ಮಾಡಿದೆ.ಭಾರತ ನೀಡಿದ್ದ 229 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಲಂಕಾ 16.4 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಯಿತು.