ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 202 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ.ಇದರೊಂದಿಗೆ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ದ.ಆಫ್ರಿಕಾವನ್ನು ವೈಟ್ ವಾಶ್ ಮಾಡಿದ ಸಾಧನೆ ಮಾಡಿದೆ. ಇನ್ನು, ದ.ಆಫ್ರಿಕಾ ಪಾಲಿಗೆ ಬರೋಬ್ಬರಿ 19 ವರ್ಷಗಳ ಬಳಿಕ ಸಿಗುತ್ತಿರುವ ಅತ್ಯಂತ ದೊಡ್ಡ ಅಂತರದ ಸೋಲು ಇದಾಗಿದೆ. ಅಲ್ಲದೆ, ಟೆಸ್ಟ್ ಸರಣಿಯಲ್ಲಿ ಇದು ಮೂರನೇ ಬಾರಿ