ದುಬೈ: ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರೆ ಟೀಂ ಇಂಡಿಯಾ ಟೆಸ್ಟ್ ಮಾದರಿಯಂತೆ ಏಕದಿನ ಪಂದ್ಯಗಳಲ್ಲೂ ನಂ.1 ತಂಡವಾಗುತ್ತಿತ್ತು. ಆದರೂ ಐಸಿಸಿ ಶ್ರೇಯಾಂಕದಲ್ಲಿ ತನ್ನ ಮೊದಲಿನ ಸ್ಥಾನವನ್ನೇ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ 116 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. 119 ಅಂಕ ಹೊಂದಿರುವ ದ. ಆಫ್ರಿಕಾ ಪ್ರಥಮ ಮತ್ತು 117 ಅಂಕ ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಪಾಕ್, ಬಾಂಗ್ಲಾದೇಶ ಮತ್ತು ಲಂಕಾ ತಂಡವನ್ನು