ತವರಿಗೆ ಬಂದ ಟೀಂ ಇಂಡಿಯಾ ಹೀರೋಗಳ ಸ್ವಾಗತಕ್ಕೆ ಕೊರೋನಾ ಅಡ್ಡಿ

ಮುಂಬೈ| Krishnaveni K| Last Modified ಗುರುವಾರ, 21 ಜನವರಿ 2021 (10:31 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ತವರಿಗೆ ಮರಳಿದ ಟೀಂ ಇಂಡಿಯಾ ಹೀರೋಗಳ ಸ್ವಾಗತಕ್ಕೆ ಕೊರೋನಾ ಅಡ್ಡಿಯಾಗಿದೆ.

 
ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ ರಿಷಬ್ ಪಂತ್ ಜೊತೆಗೆ ರೋಹಿತ್ ಶರ್ಮಾ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಈ ವೇಳೆ ಅವರಿಗೆ ಕೊರೋನಾ ಕಾರಣದಿಂದಾಗಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ನೀಡಲು ಸಾಧ‍್ಯವಾಗಿಲ್ಲ. ಆದರೆ ಮಾಧ್ಯಮಗಳು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ ರಿಷಬ್ ‘ಈ ಗೆಲುವು ನನಗೆ ಅತ್ಯಂತ ಸಂತಸ ತಂದಿದೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :