ಉಗ್ರರ ಬೆದರಿಕೆ ಹಿನ್ನಲೆ: ಟೀಂ ಇಂಡಿಯಾಗೆ ಟೈಟ್ ಸೆಕ್ಯೂರಿಟಿ

ಆಂಟಿಗುವಾ, ಮಂಗಳವಾರ, 20 ಆಗಸ್ಟ್ 2019 (09:42 IST)

ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಉಗ್ರರ ದಾಳಿ ಬೆದರಿಕೆ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.


 
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಮೇಲ್ ವಿಳಾಸಕ್ಕೆ ಅನಾಮಧೇಯ ಪತ್ರವೊಂದು ಬಂದಿತ್ತು. ಇದರಲ್ಲಿ ವಿಂಡೀಸ್ ನಲ್ಲಿರುವ ಟೀಂ ಇಂಡಿಯಾ ಮೇಲೆ ಯಾವುದೇ ಕ್ಷಣದಲ್ಲಾದರೂ ದಾಳಿಯಾಗಬಹುದು ಎಂದು ಬೆದರಿಕೆ ಹಾಕಲಾಗಿತ್ತು. ಈ ಈಮೇಲ್ ನ್ನು ಪಿಸಿಬಿ ಐಸಿಸಿಗೆ ಫಾರ್ವರ್ಡ್ ಮಾಡಿತ್ತು. ಈ ವಿಚಾರವನ್ನು ಬಿಸಿಸಿಐ ಕೇಂದ್ರ ಗೃಹ ಇಲಾಖೆ ಗಮನಕ್ಕೆ ತಂದಿತ್ತು.
 
ಹೀಗಾಗಿ ಆಂಟಿಗುವಾದಲ್ಲಿರುವ ರಾಯಭಾರಿ ಕಚೇರಿಗೆ ಕೇಂದ್ರ ಗೃಹ ಇಲಾಖೆ  ಸೂಚನೆ ನೀಡಿತ್ತು. ಅದರಂತೆ ಈಗ ವಿಂಡೀಸ್ ನಲ್ಲಿರುವ ಭಾರತ ತಂಡ ಉಳಿದುಕೊಳ್ಳುವ ಹೋಟೆಲ್, ಮೈದಾನ ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ದಾಳಿ ಭೀತಿ: ಪಾಕ್ ಕ್ರಿಕೆಟ್ ಮಂಡಳಿಗೆ ಬಂದ ಈಮೇಲ್

ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ...

news

11 ವರ್ಷದ ವೃತ್ತಿ ಬದುಕಿನ ಬಗ್ಗೆ ಭಾವುಕರಾಗಿ ಪತ್ರ ಬರೆದ ವಿರಾಟ್ ಕೊಹ್ಲಿ: ರನ್ ಮೆಷಿನ್ ಗೆ ತವರೂರಿನ ಗಿಫ್ಟ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 11 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ನಾಯಕ ...

news

ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಗೆ ಬೌಲಿಂಗ್ ಏಟು: ಕೂದಲೆಳೆಯಲ್ಲಿ ತಪ್ಪಿದ ಅನಾಹುತ

ಲಂಡನ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದ ...

news

ಕಾಶ್ಮೀರದಲ್ಲಿ ಕರ್ತವ್ಯ ಮುಗಿಸಿದ ಲೆಫ್ಟಿನೆಂಟ್ ಕರ್ನಲ್ ಧೋನಿ

ನವದೆಹಲಿ: ಕ್ರಿಕೆಟ್ ಬಿಟ್ಟು ಸೇನೆಯಲ್ಲಿ ಸೇವೆ ಸಲ್ಲಿಸಲು ಹೋಗಿದ್ದ ಕ್ರಿಕೆಟಿಗ ಧೋನಿ ಕಾಶ್ಮೀರದಿಂದ ...