ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ವೇಗಿಗಳಾದ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಕಮ್ ಬ್ಯಾಕ್ ಮಾಡಿದ್ದು, ಶಾರ್ದೂಲ್ ಠಾಕೂರ್`ಗೆ ಕೊಕ್ ನೀಡಲಾಗಿದೆ. ಆಲ್ರೌಂಡರ್`ಗಳಾದ ಆರ್. ಅಶ್ವಿನ್ ಮತ್ತು ಜಡೇಜಾಗೆ ಮತ್ತೆ ವಿಶ್ರಾಂತಿ ನೀಡಲಾಗಿದೆ. ಯುವರಾಜ್ ಸಿಂಗ್`ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಆದರೆ, ಯುವರಾಜ್ ಅವರನ್ನ ಕಡೆಗಣಿಸಿಲ್ಲ ವಿಶ್ರಾಂತಿ ನಿಡಿರುವುದಾಗಿ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ.ಸದ್ಯ,