ಮುಂಬೈ: ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಸ್ಟ್ರೇಲಿಯಾ ಈಗಾಗಲೇ ತನ್ನ ತಂಡ ಘೋಷಣೆ ಮಾಡಿದೆ. ಇದೀಗ ಟೀಂ ಇಂಡಿಯಾ ಯಾವಾಗ ತಂಡ ಘೋಷಣೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.ಬಿಸಿಸಿಐ ಮೂಲಗಳ ಪ್ರಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಟೀಂ ಇಂಡಿಯಾ ಸದಸ್ಯರ ಆಯ್ಕೆ ನಡೆಸಲಿದೆ.ಈ ಬಾರಿ ಯುವಕರಿಗೆ ಹೆಚ್ಚಿನ ಮಣೆ ಸಿಗಲಿದೆ. ಕೆಎಲ್ ರಾಹುಲ್-ರೋಹಿತ್ ಶರ್ಮಾ ಆರಂಭಿಕರಾಗುವುದು ಪಕ್ಕಾ ಎನ್ನಲಾಗುತ್ತಿದೆ.