Widgets Magazine

ವಿಶ್ವಕಪ್ ಕೂಟವುದ್ದಕ್ಕೂ ಪತ್ನಿಯನ್ನು ಕರೆದೊಯ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ| Krishnaveni K| Last Modified ಭಾನುವಾರ, 21 ಜುಲೈ 2019 (11:18 IST)
ಮುಂಬೈ: ವಿಶ್ವಕಪ್ ಕ್ರಿಕೆಟ್ ಕೂಟದ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ 15 ದಿನ ಮಾತ್ರ ಪತ್ನಿಯನ್ನು ಜತೆಯಲ್ಲಿ ಕರೆದೊಯ್ಯಲು ಅವಕಾಶವಿತ್ತು.

 
ಆದರೆ ತಂಡದ ಹಿರಿಯ ಕ್ರಿಕೆಟಿಗರೊಬ್ಬರು ನಿಯಮಗಳನ್ನು ಮೀರಿ ಟೂರ್ನಿಯುದ್ಧಕ್ಕೂ ಪತ್ನಿಯನ್ನು ಜತೆಯಲ್ಲಿ ಕರೆದೊಯ್ದಿದ್ದಕ್ಕೆ ಇದೀಗ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಈ ಹಿರಿಯ ಕ್ರಿಕೆಟಿಗ ಯಾರು ಎಂಬುದನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ.
 
ಹಾಗಿದ್ದರೂ ಆ ಹಿರಿಯ ಆಟಗಾರನಿಂದ ಈ ಬಗ್ಗೆ ವಿವರಣೆ ಕೇಳಲಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. 15 ದಿನಕ್ಕಿಂತ ಹೆಚ್ಚು ಪತ್ನಿಯನ್ನು ಕರೆದೊಯ್ಯಲು ಈ ಕ್ರಿಕೆಟಿಗ ನಾಯಕ ಅಥವಾ ಕೋಚ್ ಬಳಿ ಒಪ್ಪಿಗೆ ಪಡೆದಿರಲಿಲ್ಲ ಎಂದು ಬಿಸಿಸಿಐ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
ಇದರಲ್ಲಿ ಇನ್ನಷ್ಟು ಓದಿ :