ಮೊಟೆರಾದಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಅಹಮ್ಮದಾಬಾದ್| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (10:00 IST)
ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಬುಧವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಅಭ್ಯಾಸ ಆರಂಭಿಸಿದ್ದಾರೆ.
 

ಮೊಟೆರಾ ಕ್ರೀಡಾಂಗಣದಲ್ಲಿ ಕ್ರಿಕೆಟಿಗರು ಲಘು ಅಭ್ಯಾಸ ಆರಂಭಿಸಿದ್ದಾರೆ. ನಿನ್ನೆ ಫೀಲ್ಡಿಂಗ್, ದೈಹಿಕ ಕಸರತ್ತಿಗೆ ಒತ್ತುಕೊಟ್ಟ ಕ್ರಿಕೆಟಿಗರು ಇಂದು ನೆಟ್ ಪ್ರಾಕ್ಟೀಸ್ ಆರಂಭಿಸುವ ಸಾಧ‍್ಯತೆಯಿದೆ. ವಿಶ್ವದ ಬೃಹತ್ ಕ್ರೀಡಾಂಗಣದಲ್ಲಿ ಫೆಬ್ರವರಿ 24 ರಿಂದ ಹಗಲು ರಾತ್ರಿಯಾಗಿ ಪಂದ್ಯ ನಡೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :