Widgets Magazine

ಭಾರತ-ನ್ಯೂಜಿಲೆಂಡ್ ಟೆಸ್ಟ್: ಟೀಂ ಇಂಡಿಯಾ ಜತೆಗೆ ಮಳೆಯ ಜತೆಯಾಟ

ವೆಲ್ಲಿಂಗ್ಟನ್| Krishnaveni K| Last Modified ಶುಕ್ರವಾರ, 21 ಫೆಬ್ರವರಿ 2020 (11:23 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ದಿನ ಮಳೆಯಿಂದಾಗಿ ದಿನದಾಟ ಬೇಗನೇ ಮುಕ್ತಾಯವಾಗಿದೆ.

 
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಭಾರತದ ಆಟಗಾರರು ಕಿವೀಸ್ ದಾಳಿಯ ಎದುರು ಸಮರ್ಥವಾಗಿ ನಿಂತು ಆಡುವ ಧೈರ್ಯ ಮಾಡಲಿಲ್ಲ. ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ ಕುಂಟುತ್ತಾ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು.
 
ಆದರೆ ಅದಾದ ಬಳಿಕ ಮಳೆ ಸುರಿದಿದ್ದರಿಂದ ಕೊಂಚ ತಡವಾಗಿ ಕೊನೆಯ ಅವಧಿಯ ಆಟ ಆರಂಭಿಸಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಒದ್ದೆ ಮೈದಾನದಿಂದಾಗಿ ಆಟ ಮುಂದುವರಿಸಲು ಸಾಧ‍್ಯವಾಗಲಿಲ್ಲ.
ಇದರಲ್ಲಿ ಇನ್ನಷ್ಟು ಓದಿ :