ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ಟೀಂ ಇಂಡಿಯಾ ಹರ ಸಾಹಸ

ಬ್ರಿಸ್ಬೇನ್| Krishnaveni K| Last Modified ಭಾನುವಾರ, 17 ಜನವರಿ 2021 (09:38 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ.
 

ಭಾರತ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತವನ್ನು ದಾಟಲು ಇನ್ನೂ 145 ರನ್ ಗಳಿಸಬೇಕಿದೆ. ಸದ್ಯಕ್ಕೆ ಭಾರತದ ಪರ 29 ರನ್ ಗಳಿಸಿರುವ ವಾಷಿಂಗ್ಟನ್ ಸುಂದರ್ ಮತ್ತು 15 ರನ್ ಗಳಿಸಿರುವ ಶ್ರಾದ್ಧೂಲ್ ಠಾಕೂರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಕೊಂಚ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಿನ್ನೆ ಅಜೇಯರಾಗಿದ್ದ ಚೇತೇಶ್ವರ ಪೂಜಾರ 25,  ರೆಹಾನೆ 37, ಮಯಾಂಕ್ ಅಗರ್ವಾಲ್ 38, ರಿಷಬ್ ಪಂತ್ 23 ರನ್ ಗಳಿಸಿ ಔಟಾದರು.
ಇದರಲ್ಲಿ ಇನ್ನಷ್ಟು ಓದಿ :