ಟೀಂ ಇಂಡಿಯಾ ಸಹಾಯಕ ಕೋಚ್ ಬಳಗದ ಆಯ್ಕೆ ಪ್ರಕ್ರಿಯೆ ಶುರು: ಹೊಸ ನೇಮಕ ಸಾಧ್ಯತೆ ಕಡಿಮೆ

ಮುಂಬೈ, ಮಂಗಳವಾರ, 20 ಆಗಸ್ಟ್ 2019 (10:03 IST)

ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಮತ್ತೆ ರವಿಶಾಸ್ತ್ರಿಯೇ ಮುಂದುವರಿದಿದ್ದಾರೆ. ಇದೀಗ ಸಹಾಯಕ ಕೋಚ್ ಗಳ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ.
 


ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ನೇತೃತ್ವದ ಐವರ ಸಮಿತಿ ಸಹಾಯಕ ಕೋಚ್ ಸಿಬ್ಬಂದಿಗಳ ನೇಮಕಾತಿ ನಡೆಸುತ್ತಿದೆ. ಇದಕ್ಕಾಗಿ ನಿನ್ನೆಯಿಂದಲೇ ಆಯ್ಕೆ ಪ್ರಕ್ರಿಯೆ ಶುರು ಮಾಡಿಕೊಂಡಿದೆ. ಗುರುವಾರದ ವೇಳೆಗೆ ಅಂತಿಮ ಪ್ರಕಟಣೆ ನೀಡುವ ನಿರೀಕ್ಷೆಯಿದೆ.
 
ಈಗಾಗಲೇ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಆರ್ ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರೂ ರವಿಶಾಸ್ತ್ರಿಯ ಮೆಚ್ಚಿನ ಆಯ್ಕೆ. ಹೀಗಾಗಿ ಇವರೇ ಮತ್ತೆ ಆ ಸ್ಥಾನದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಆದರೆ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಹೊಸಬರ ನೇಮಕವಾಗುವ ಸಾಧ್ಯತೆಯಿದೆ. ಅವರು ಯಾರು ಎನ್ನುವುದಷ್ಟೇ ಕುತೂಹಲ ಬಾಕಿ ಉಳಿದಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಾರ್ದಿಕ್ ಪಾಂಡ್ಯ ಜತೆಗೆ ಸ್ನೇಹ ಕಡಿದುಕೊಂಡರಾ ಕೆಎಲ್ ರಾಹುಲ್?

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಹಿಂದೊಮ್ಮೆ ಕರಣ್ ಜೋಹರ್ ...

news

ಉಗ್ರರ ಬೆದರಿಕೆ ಹಿನ್ನಲೆ: ಟೀಂ ಇಂಡಿಯಾಗೆ ಟೈಟ್ ಸೆಕ್ಯೂರಿಟಿ

ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಉಗ್ರರ ದಾಳಿ ಬೆದರಿಕೆ ಹಿನ್ನಲೆಯಲ್ಲಿ ...

news

ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ದಾಳಿ ಭೀತಿ: ಪಾಕ್ ಕ್ರಿಕೆಟ್ ಮಂಡಳಿಗೆ ಬಂದ ಈಮೇಲ್

ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ...

news

11 ವರ್ಷದ ವೃತ್ತಿ ಬದುಕಿನ ಬಗ್ಗೆ ಭಾವುಕರಾಗಿ ಪತ್ರ ಬರೆದ ವಿರಾಟ್ ಕೊಹ್ಲಿ: ರನ್ ಮೆಷಿನ್ ಗೆ ತವರೂರಿನ ಗಿಫ್ಟ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 11 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ನಾಯಕ ...