ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೂರನೇ ದಿನದಂತ್ಯಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.ಈ ಮೂಲಕ ಟೀಂ ಇಂಡಿಯಾ ತನ್ನ ಇನಿಂಗ್ಸ್ ಮುನ್ನಡೆಯನ್ನು 166 ರನ್ ಗಳಿಗೆ ವಿಸ್ತರಿಸಿತು. ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಚೇತೇಶ್ವರ ಪೂಜಾರ ಮತ್ತೊಂದು ತಾಳ್ಮೆಯ ಇನಿಂಗ್ಸ್ ಆಡುತ್ತಿದ್ದ, ವಿರಾಟ್ ಕೊಹ್ಲಿ ಔಟಾದ ಬಳಿಕ ತಂಡಕ್ಕೆ ಬೇಕಾಗಿರುವ ಚೇತರಿಕೆ ನೀಡುತ್ತಿದ್ದಾರೆ.