ನಾಗ್ಪುರ: ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಊಟದ ವಿರಾಮಕ್ಕೆ ಮೊದಲು ಎದುರಾಳಿಗಳ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಲಂಕಾ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ಎಚ್ಚರಿಕೆಯಿಂದ ನಿಧಾನಗತಿಯ ಇನಿಂಗ್ಸ್ ಕಟ್ಟುತ್ತಿರುವ ಲಂಕಾ ಕಳೆದ ಪಂದ್ಯದಲ್ಲಿ ಆದ ತಪ್ಪುಗಳನ್ನು ಸರಿಪಡಿಸುವ ಧಾವಂತದಲ್ಲಿದೆ.ಆದರೆ ಕಳೆದ ಪಂದ್ಯದ ಹೀರೋಗಳಾದ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ