ಭಾರತ-ವಿಂಡೀಸ್ ತೃತೀಯ ಟಿ20: ಇಂದಾದರೂ ಸಿಗುತ್ತಾ ಕೆಎಲ್ ರಾಹುಲ್ ಗೆ ಸ್ಥಾನ?

ಫ್ಲೋರಿಡಾ| Krishnaveni K| Last Modified ಮಂಗಳವಾರ, 6 ಆಗಸ್ಟ್ 2019 (09:24 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರನೇ ಟಿ20 ಪಂದ್ಯ ನಡೆಯಲಿದ್ದು, ಸರಣಿ ಗೆದ್ದಿರುವ ಟೀಂ ಇಂಡಿಯಾಗೆ ಇದು ಔಪಚಾರಿಕ ಪಂದ್ಯವಾಗಿದೆ.

 
ಈಗಾಗಲೇ ನಾಯಕ ಕೊಹ್ಲಿ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ಅವಕಾಶ ನೀಡುವ ಮಾತನಾಡಿದ್ದಾರೆ. ಹಾಗಾಗಿ ಕೆಎಲ್ ರಾಹುಲ್ ಗೆ ಈ ಪಂದ್ಯದಲ್ಲಾದರೂ ಅವಕಾಶ ಸಿಗುವ ಸಾಧ್ಯತೆಯಿದೆ.
 
ರಾಹುಲ್ ಬದಲಾಗಿ ಇನ್ನೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಸ್ಥಾನ ಕಳೆದುಕೊಂಡರೂ ಅಚ್ಚರಿಯಿಲ್ಲ. ಬೌಲಿಂಗ್ ನಲ್ಲೂ ಇಂದು ಕೆಲವು ಬದಲಾವಣೆ ನಿರೀಕ್ಷಿಸಬಹುದು. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :