Widgets Magazine

ಭಾರತ-ವಿಂಡೀಸ್ ಮೊದಲ ಟಿ20: ಟೀಂ ಇಂಡಿಯಾದೊಳಗೇ ಶುರುವಾಗಿದೆ ಕದನ!

ಫ್ಲೋರಿಡಾ| Krishnaveni K| Last Modified ಶನಿವಾರ, 3 ಆಗಸ್ಟ್ 2019 (09:26 IST)
ಫ್ಲೋರಿಡಾ: ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸ ಇಂದು ಟಿ20 ಪಂದ್ಯದೊಂದಿಗೆ ಆರಂಭವಾಗುತ್ತಿದೆ.

 
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಎದುರಾಳಿಗಳಿಗಿಂತ ತಂಡದೊಳಗಿನ ಮುಸುಕಿನ ಗುದ್ದಾಟವನ್ನು ಹತ್ತಿಕ್ಕುವ ಅನಿವಾರ್ಯತೆಯೇ ಹೆಚ್ಚಿದೆ.
 
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಇವರಿಬ್ಬರ ತೆರೆಮರೆಯ ಗುದ್ದಾಟ ಭಾರತ ತಂಡಕ್ಕೆ ಲಾಭ ತರಲಿ ಎಂಬುದೇ ಅಭಿಮಾನಿಗಳ ಹಾರೈಕೆ.
 
ಟೀಂ ಇಂಡಿಯಾ ಈ ಬಾರಿ ಧೋನಿ ಇಲ್ಲದೇ ಆಡುತ್ತಿದೆ. ತಂಡದ ಸಂಯೋಜನೆ ವಿಷಯದಲ್ಲಿ ಸದಾ ತಮಗೆ ಬೆಂಬಲವಾಗಿ ನಿಲ್ಲುವ ಧೋನಿ ಇಲ್ಲದೇ ಕೊಹ್ಲಿ ಹೇಗೆ ಎಲ್ಲವನ್ನೂ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :