ಭಾರತ-ವೆಸ್ಟ್ ಇಂಡೀಸ್ ನಡುವೆ ತೃತೀಯ ಏಕದಿನ ಇಂದು: ನಾಲ್ಕರ ಸ್ಥಾನಕ್ಕೆ ಯಾರು ಎಂಬುದೇ ಪ್ರಶ್ನೆ

ಪೋರ್ಟ್ ಆಫ್ ಸ್ಪೇನ್, ಬುಧವಾರ, 14 ಆಗಸ್ಟ್ 2019 (08:48 IST)

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು  ವೆಸ್ಟ್ ಇಂಡೀಸ್ ನಡುವೆ ಇಂದು ತೃತೀಯ ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಒಂದು ಪಂದ್ಯ ಗೆದ್ದಿರುವ ಭಾರತಕ್ಕೆ ಇಂದು ಸೋತರೂ ಸರಣಿ ಸೋಲಿಲ್ಲ.


 
ಇಂದು ಅಂತಿಮ ಏಕದಿನ ಪಂದ್ಯವಾಗಿದ್ದು, ಇಂದು ಗೆದ್ದರೆ ಭಾರತಕ್ಕೆ ಏಕದಿನ ಸರಣಿಯೂ ಸ್ವಂತವಾಗಲಿದೆ. ಟಿ20 ಯಲ್ಲಿ ಈಗಾಗಲೇ ವಿಂಡೀಸ್ ವೈಟ್ ವಾಶ್ ಆಗಿತ್ತು.
 
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಯಾರು ಎಂಬ ಪ್ರಶ್ನೆಗೆ ತಾತ್ಕಾಲಿಕ ಉತ್ತರ ಸಿಗಲಿದೆ. ಕಳೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ. ಒಂದು ವೇಳೆ ಹೀಗಾದರೆ ಕನ್ನಡಿಗ ಕೆಎಲ್ ರಾಹುಲ್ ಅವಕಾಶ ವಂಚಿತರಾಗಲಿದ್ದಾರೆ. ಇದುವರೆಗೆ ಅವಕಾಶ ಪಡೆಯದ ರಾಹುಲ್ ಗೆ ಈ ಪಂದ್ಯದಲ್ಲಿ ಶಿಖರ್ ಧವನ್ ಸ್ಥಾನದಲ್ಲಿ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಇದರ ಹೊರತಾಗಿ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ‍್ಯತೆ ಕಡಿಮೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸೋನಿ ಸಿಕ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಂಡೀಸ್ ಆಟಗಾರನೊಂದಿಗೆ ಟೀಂ ಇಂಡಿಯಾ ಆಟಗಾರರ ಸುತ್ತಾಟ

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ಆಡಲು ಕೆರೆಬಿಯನ್ ನಾಡಿಗೆ ತೆರಳಿರುವ ಟೀಂ ...

news

ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೇ ಗಾಳ ಹಾಕುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ: ಐಪಿಎಲ್ ಗೆ ಇನ್ನೂ ಸಾಕಷ್ಟು ಸಮಯವಿದೆ. ಹಾಗಿದ್ದರೂ ತಮ್ಮ ತಮ್ಮ ತಂಡಕ್ಕೆ ಅತ್ಯುತ್ತಮ ...

news

ಯಾವುದೇ ಹಾಡು ಕೇಳಿದ್ರೂ ಡ್ಯಾನ್ಸ್ ಮಾಡ್ಬೇಕು ಎನಿಸ್ತಿದೆಯಂತೆ ವಿರಾಟ್ ಕೊಹ್ಲಿಗೆ!

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದ ನಡುವೆ ವಿಂಡೀಸ್ ನ ಕ್ರಿಸ್ ...

news

ಎಷ್ಟೋ ದಿನದಿಂದ ಕಾಯುತ್ತಿದ್ದ ಶತಕ ಕೊನೆಗೂ ವಿರಾಟ್ ಕೊಹ್ಲಿಯ ಕೈಗೆಟುಕಿತು

ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಶತಕ ಗಳಿಸಿದ್ದು ...