ಭಾರತ-ವಿಂಡೀಸ್ ದ್ವಿತೀಯ ಏಕದಿನ ಇಂದು: ಮಳೆ ಕರುಣೆ ತೋರಿದರೆ ಪಂದ್ಯ

bangalore, ಭಾನುವಾರ, 11 ಆಗಸ್ಟ್ 2019 (08:47 IST)

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಮಳೆ ಕೃಪೆ ತೋರಿದರೆ ಮಾತ್ರ ಪಂದ್ಯ ಎಂಬ ಪರಿಸ್ಥಿತಿ ಎದುರಾಗಿದೆ.


 
ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಒಟ್ಟು ಮೂರು ಪಂದ್ಯಗಳ ಸರಣಿಯನ್ನು ಗೆಲ್ಲಬೇಕಾದರೆ ಯಾವುದೇ ತಂಡವೂ ಇನ್ನೆರಡೂ ಪಂದ್ಯಗಳನ್ನೂ ಗೆದ್ದುಕೊಳ್ಳಬೇಕು.
 
ಭಾರತ ವಿಂಡೀಸ್ ಗೆ ಕಾಲಿಟ್ಟಾಗಿನಿಂದ ಮಳೆಯದ್ದೇ ಆಟವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಾದರೂ ಮಳೆ ಕೃಪೆ ತೊರಿ ಆಟ ಸಂಪೂರ್ಣವಾದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ.
 
ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖವಾಗಿ ನಾಲ್ಕನೇ ಕ್ರಮಾಂಕಕ್ಕೆ ಯಾರನ್ನು ಆಡಿಸುತ್ತಾರೆ ಎಂಬುದೇ ಕುತೂಹಲದ ವಿಚಾರವಾಗಿದೆ. ಒಂದು ವೇಳೆ ರಿಷಬ್ ಪಂತ್ ರನ್ನು ಆಡಿಸಿದರೆ, ಕೆಎಲ್ ರಾಹುಲ್ ಇನ್ನೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಬೇಕಾಗುತ್ತದೆ. ಇದರ ಹೊರತಾಗಿ ಮೊದಲ ಪಂದ್ಯದಲ್ಲಿ ನವ್ ದೀಪ್ ಶೈನಿಗೆ ಅವಕಾಶ ನೀಡಿರಲಿಲ್ಲ. ಟಿ20 ಸರಣಿಯಲ್ಲಿ ಮಿಂಚಿದ್ದ ಶೈನಿಯನ್ನು ಈ ಪಂದ್ಯದಲ್ಲಿ ಆಡಿಸಲೂಬಹುದು. ಒಟ್ಟಾರೆ ತಂಡದ ಕಾಂಬಿನೇಷನ್ ಆಯ್ಕೆ ನಾಯಕ ಕೊಹ್ಲಿಗೆ ದೊಡ್ಡ ತಲೆನೋವಾಗಲಿದೆ.
 
ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸೋನಿ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕ್ರಿಕೆಟಿಗ ಸುರೇಶ್ ರೈನಾಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಮುಂದಿನ ...

news

ಸ್ವಾತಂತ್ರ್ಯೋತ್ಸವದ ದಿನ ಜಮ್ಮು ಕಾಶ್ಮೀರದಲ್ಲಿ ಧ್ವಜ ಹಾರಿಸಲಿರುವ ಧೋನಿ

ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿರುವ ಕ್ರಿಕೆಟಿಗ ಧೋನಿ ...

news

ಇನ್ಮುಂದೆ ಟೀಂ ಇಂಡಿಯಾ ಆಟಗಾರರಿಗೆ ಉದ್ದೀಪನಾ ಔಷಧ ಸೇವನೆ ಪರೀಕ್ಷೆ

ಮುಂಬೈ: ಬಿಸಿಸಿಐ ಕೃಪಾಕಟಾಕ್ಷದಿಂದ ಇಷ್ಟು ದಿನ ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಾಡಾ ಸಮಿತಿಯ ಉದ್ದೀಪನಾ ಔಷಧ ...

news

ವೇತನಕ್ಕಾಗಿ ಜಿಟಿ20 ಲೀಗ್ ವಿರುದ್ಧ ಬಂಡಾಯವೆದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ಬಳಗ

ಮುಂಬೈ: ಗ್ಲೋಬಲ್ ಟಿ20 ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ...