ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ಆಟಗಾರರಿಗೆ ತುಂಬಿದ ಮೈದಾನದಲ್ಲಿ ಆಡಿಯೇ ಅಭ್ಯಾಸ. ಆದರೆ ವೆಸ್ಟ್ ಇಂಡೀಸ್ ಗೆ ಕಾಲಿಟ್ಟಾಗಿನಿಂದ ಅವರಿಗೆ ಹೊಸ ಅನುಭವವಾಗಿದೆ. ಖಾಲಿ ಹೊಡೆಯುತ್ತಿರುವ ಮೈದಾನದಲ್ಲಿ ಬೆಳ್ಳಂ ಬೆಳಗ್ಗೆ ಅಲ್ಲಿನ ಕಾಲಮಾನ ಪ್ರಕಾರ 9 ಗಂಟೆಗೆ ಪಂದ್ಯ ಆರಂಭವಾಗುತ್ತಿದೆ. ಇಷ್ಟು ಬೇಗ ಪಂದ್ಯ ಆರಂಭವಾಗುವುದರಿಂದಲೋ ಏನೋ ಅಲ್ಲಿನ ಜನ ಮೈದಾನಕ್ಕೆ ಆಗಮಿಸುವುದೇ ಲೇಟು.ಅದೂ ಅಲ್ಲದೆ, ಅಲ್ಲಿ ಇತ್ತೀಚೆಗೆ ಕ್ರಿಕೆಟ್ ಕ್ರೇಜ್ ಕಡಿಮೆಯಾಗಿದೆ. ಹೀಗಾಗಿ ನೀರಸವಾಗಿ ಪಂದ್ಯ