ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ತೃತೀಯ ಮತ್ತು ಅಂತಿಮ ಟಿ20 ಪಂದ್ಯ ಇಂದು ಕೊಲೊಂಬೋದಲ್ಲಿ ನಡೆಯಲಿದೆ.ನಿನ್ನೆ ನಡೆದ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿತ್ತು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿದೆ. ಇಂದಿನ ಪಂದ್ಯವನ್ನು ಗೆದ್ದವರು ಸರಣಿ ಕೈವಶಮಾಡಿಕೊಳ್ಳಲಿದ್ದಾರೆ.ಕೃನಾಲ್ ಪಾಂಡ್ಯ ಕೊರೋನಾ ಸೋಂಕಿತರಾಗಿರುವುದರಿಂದ ಅವರೊಂದಿಗಿದ್ದ ಆಟಗಾರರೂ ಅನಿವಾರ್ಯವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಇದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಅನುಪಸ್ಥಿತಿ ಭಾರತಕ್ಕೆ ತೀವ್ರವಾಗಿ ಕಾಡಿತ್ತು.