ಕಟಕ್: ಭಾರತ ತಂಡ ವರ್ಷದ ಕೊನೆಯ ಟಿ20 ಸರಣಿಯನ್ನು ಗೆಲುವಿನ ಮೂಲಕ ವಿದಾಯ ಹೇಳಲು ಅಣಿಯಾಗಿದೆ. ಇಂದು ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. ಪ್ರಚಲಿತವಾಗಿ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಬಲಿಷ್ಠವಾಗಿರುವ ಭಾರತ ಕ್ರಿಕೆಟ್ ತಂಡದ ಜವಾಬ್ದಾರಿ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರ ಮೇಲಿದೆ. ಅನೇಕ ಯುವ ಪ್ರತಿಭೆಗಳು ತಂಡದಲಿದ್ದು ತಮ್ಮ ಪ್ರತಿಭೆಗಳನ್ನು ತೋರಿಸಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.