ನವದೆಹಲಿ: ಬಾಂಗ್ಲಾದೇಶ ವಿರುದ್ಧ ನವಂಬರ್ 3 ರಂದು ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯದ ಮೇಲೆ ಇದೀಗ ಹಲವು ಆತಂಕಗಳ ಕಾರ್ಮೋಡ ಕವಿದಿದೆ.ಈ ಮೊದಲು ವಾಯು ಮಾಲಿನ್ಯದಿಂದಾಗಿ ಪಂದ್ಯ ನಡೆಸಲು ತೊಂದರೆಯಾಗಬಹುದು ಎಂಬ ಆತಂಕವಿತ್ತು. ಅದರ ಜತೆಗೆ ಇದೀಗ ಮತ್ತೊಂದು ಗಂಭೀರ ಅಪಾಯ ಎದುರಾಗಿದೆ.ರಾಷ್ಟ್ರೀಯ ತನಿಖಾ ದಳ ಎನ್ ಐಎ ಬಿಸಿಸಿಐಗೆ ಕ್ರಿಕೆಟಿಗರ ಜೀವಕ್ಕೆ ಅಪಾಯವಿದೆ ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ದೆಹಲಿಯಲ್ಲಿ ಕ್ರಿಕೆಟಿಗರ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ.