ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ನವದೀಪ್ ಸೈನಿ, ಸುಂದರ್; ಟೀಂ ಇಂಡಿಯಾಗೆ ಗೆಲುವು

ಫ್ಲೋರಿಡಾ| Krishnaveni K| Last Modified ಭಾನುವಾರ, 4 ಆಗಸ್ಟ್ 2019 (07:46 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.

 
ಸಂಪೂರ್ಣ ಬೌಲರ್ ಗಳಿಗೆ ಸಹಕರಿಸುತ್ತಿದ್ದ ಪಿಚ್ ನಲ್ಲಿ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 95 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಪದಾರ್ಪಣೆ ಮಾಡಿದ ವೇಗಿ ನವದೀಪ್ ಶೈನಿ ಮತ್ತು ವಾಷಿಂಗ್ಟನ್ ಸುಂದರ್ ಮಾರಕ ದಾಳಿ ಸಂಘಟಿಸಿದರು. ವಾಷಿಂಗ್ಟನ್ ಸುಂದರ್ 5 ವಿಕೆಟ್ ಗಳ ಗೊಂಚಲು ಪಡೆದರೆ ಶೈನಿ 2 ವಿಕೆಟ್ ಪಡೆದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ 17.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭಾರತದ ಬ್ಯಾಟಿಂಗ್ ಕೂಡಾ ಹೇಳಿಕೊಳ್ಳುವಂತಿರಲಿಲ್ಲ. 24 ರನ್ ಗಳಿಸಿದ ರೋಹಿತ್ ಶರ್ಮಾರೇ ಗರಿಷ್ಠ ಸ್ಕೋರರ್. ಕೊಹ್ಲಿ ಮತ್ತು ಮನೀಶ್ ಪಾಂಡೆ ತಲಾ 19 ರನ್ ಗಳ ಕೊಡುಗೆ ನೀಡಿದರು.
ಇದರಲ್ಲಿ ಇನ್ನಷ್ಟು ಓದಿ :