Photo Courtesy: Instagramಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಕೊನೆಯ ಪಂದ್ಯ ಒಂದೆಡೆಯಾದರೆ ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ನಲ್ಲಿ ಆಡುವ ಕುತೂಹಲ ಇನ್ನೊಂದೆಡೆ. ಅಂತೂ ನಿನ್ನೆ ರೋಹಿತ್ ಶರ್ಮಾ ಬಳಗಕ್ಕೂ ತಮ್ಮ ಆಟಕ್ಕಿಂತ ಮಹಿಳೆಯರ ಆಟದ ಬಗ್ಗೆ ಹೆಚ್ಚು ಗಮನವಿತ್ತು!ನಿನ್ನೆಯ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದರು. ಹೀಗಾಗಿ ತಮ್ಮದೇ ತಂಡದ ಪಂದ್ಯವಿದ್ದರೂ ಡ್ರೆಸ್ಸಿಂಗ್ ರೂಂನಲ್ಲಿ ಮೊಬೈಲ್ ಮೂಲಕ ಮಹಿಳೆಯರ ಪಂದ್ಯ ವೀಕ್ಷಿಸುತ್ತಿದ್ದರು.